ಇಟಾರ್ಸಿ

ಮಧ್ಯಪ್ರದೇಶದ ಹೊಷಂಗಾಬಾದ್ ತಹಶೀಲಿನಲ್ಲಿ ಮುಖ್ಯ ಪಟ್ಟಣ. ಬೊಂಬಾಯಿನಿಂದ 464 ಮೈಲಿ, ಕಲ್ಕತ್ತಾದಿಂದ 936 ಮೈಲಿ ದೂರದಲ್ಲಿ, ಬೊಂಬಾಯಿ-ಕಲ್ಕತ್ತ ರೈಲುಮಾರ್ಗದಲ್ಲಿದೆ. ಕಾನ್ಪುರ, ಆಗ್ರಾ ನಗರಗಳೊಂದಿಗೂ ರೈಲುಸಂಪರ್ಕ ಹೊಂದಿದೆ. ರೈಲುಗಳು ಸಂಧಿಸುವ ಸ್ಥಳವಾದ್ದರಿಂದ ಊರಿನ ಪ್ರಾಮುಖ್ಯ ಹೆಚ್ಚುತ್ತಿದೆ. ಹೊಷಂಗಾಬಾದ್ ಜಿಲ್ಲೆಯ ರಫ್ತು ವ್ಯಾಪಾರದ ಬಹುಭಾಗ ಈ ಊರಿನ ಮೂಲಕ ನಡೆಯುತ್ತದೆ. ಪ್ರತಿವಾರವೂ ದನಗಳ ಭಾರಿ ಪರಿಸೆ ನಡೆಯುತ್ತದೆ. ಇಲ್ಲಿ ಫ್ರೆಂಡ್ಸ್ ಫಾರಿನ್ ಮಿಷನ್ ಎಂಬ ಕ್ರೈಸ್ತ ಸಂಸ್ಥೆ ನಡೆಸುತ್ತಿರುವ ಒಂದು ದೊಡ್ಡ ಪಾಠಶಾಲೆಯಿದೆ.							

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ